ನವೆಂಬರ್ ೧೯ - ನವೆಂಬರ್ ತಿಂಗಳ ಹತ್ತೊಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨೩ನೇ (ಅಧಿಕ ವರ್ಷದಲ್ಲಿ ೩೨೪ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೬೩ - ಅಮೇರಿಕದ ಅಂತಃಕಲಹದಲ್ಲಿ ಅಬ್ರಹಮ್ ಲಿಂಕನ್ ತನ್ನ ಗೆಟ್ಟಿಸ್ಬರ್ಗ್ ಭಾಷಣವನ್ನು ನೀಡಿದನು. ೧೯೬೯ - ಅಪೊಲೊ ಕಾರ್ಯಕ್ರಮದ ಅಪೊಲೊ-೧೨ರ ಅಂತರಿಕ್ಷಯಾನಿಗಳಾದ ಚಾರ್ಲ್ಸ್ ಕೊನ್ರಾಡ್ ಮತ್ತು ಅಲನ್ ಬೀನ್ ಚಂದ್ರನ ಮೇಲೆ ನಡೆದ ಮೂರನೇ ಮತ್ತು ನಾಲ್ಕನೇ ಮನುಜರಾದರು. ೧೯೭೭ - ಅನ್ವರ್ ಸಾದತ್ ಇಸ್ರೇಲ್ ಅನ್ನು ಭೇಟಿ ಮಾಡಿದ ಮೊದಲ ಅರಬ್ ನಾಯಕನಾದನು. == ಜನನ == ೧೮೩೫ - ಝಾನ್ಸಿ ರಾಣಿ ಲಕ್ಷ್ಮಿಭಾಯ್, ಝಾನ್ಸಿಯ ರಾಣಿ ಮತ್ತು ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ್ತಿ. ೧೯೧೨ - ಜಾರ್ಜ್ ಪಾಲಡೆ, ರೊಮೆನಿಯದ ಜೀವಕಣಶಾಸ್ತ್ರ ತಜ್ಞ, ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ. ೧೯೧೭ - ಇಂದಿರಾ ಗಾಂಧಿ, ಭಾರತದ ಪ್ರಧಾನಮಂತ್ರಿ. == ನಿಧನ == ೧೮೮೩ - ವಿಲಿಯಮ್ ಸೀಮನ್ಸ್, ಜರ್ಮನಿಯ ತಂತ್ರಜ್ಞ. == ರಜೆಗಳು/ಆಚರಣೆಗಳು == ಮಾಲಿ - ಬಿಡುಗಡೆ ದಿನ. ಬ್ರೆಜಿಲ್ - ಧ್ವಜ ದಿನ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ